Monday, October 8, 2012

"ಅವ್ರ ಇನ್ಮ್ಯಕ್ ಇರ್ತಾರ್ ನಮ್ ಮನ್ಯಾಗೆ"

ಸಿದ್ದನ್ ನಾನು ಇಲ್ಗಂಟ್ ನೋಡಿದ್,ಅವ್ನ್ ಅಂಗಡೀಲೇನೇ
ಅವ್ನ್ ಮನೆ ಎಲ್ಲೈತೋ, ಅಲ್ ಯಾರವ್ರೋ ದೇವ್ರ ಆಣೆಗೂ ಕಾಣೆ


ನಂಗ್ ಬೇಕಾದವ್ರು ಇದ್ರು ಒಬ್ರು,ಸಿದ್ದ್ನ್ ಅಂಗಡೀಗ್ ಬರ್ತಿದ್ರು
ನಂದು ಅವರ್ದು ಬಲೇ ದೋಸ್ತಿ, ನಂಗ್ ಗುರುಗಳ್ ಅವ್ರು


ಇದ್ಕಿದ್ದಂಗೆ ಬೆಳಿಗ್ಗ್ನೆ ಎದ್ದು, ಸಿದ್ದನ್ ತಾಕ್ ಹೋಗ್ತೀನಂದ್ರು
ಕುಡಿಯಕ್ ಹೋಗ್ತಾರೇನೋ ಅಂತ ತಿಲ್ಕೊಂಡಿದ್ರು ಎಲ್ರು


ಕಾದು ಕಾದು ಸಿದ್ದನ್ ಅಂಗಡೀಗ್ ಹೋಗಿ ಇಚಾರ್ಸಿದ್ರೆ.....
ಗಲ್ಲ್ದಾಗ್ ಕುಂತಿದ್ ಸಿದ್ದ ಎಳ್ದಾ, "ಅವ್ರ ಇನ್ಮ್ಯಕ್ ಇರ್ತಾರ್ ನಮ್ ಮನ್ಯಾಗೆ"

No comments: