Saturday, December 4, 2010

ನೊಂದಿರುವ ಜೀವಕ್ಕೆ, ಸಾಧನೆಯ ಪ್ರೇರಣೆಗೆ....

ಮುನ್ನುಡಿ: ಇತ್ತೇಚೆಗೆ ನನ್ನ ಒಬ್ಬ ಸ್ನೇಹಿತ ದುಃಖದಲ್ಲಿ ಇದ್ದಾಗ ನನ್ನ ಹತ್ತಿರ ಬಂದು....ಏನಾದರು ಬರಿದು ನನ್ನನ್ನು ಪ್ರೇರೇಪಿಸು..... ಅಂತ ಹೇಳಿದಾಗ......ಮೂಡಿದ ಕವಿತೆ ಇದು.


ಅದೇಕೋ ಈ ಕವಿತೆ ಬರೆಯುವಾಗ ಹಾಗು ಬರೆದ ಮೇಲೆ, ನನಗೆ 'ನಾನು' ಈ ಕವಿತೆ ಬರೀಲಿಲ್ಲ....ಯಾರೋ ನನ್ನಿಂದ ಇದನ್ನು ಬರಿಸುತ್ತಿದ್ದಾರೆ....ಪ್ರಾಯಶಃ...ಅವರೇ ಆ ನನ್ನ ಸ್ನೇಹಿತನ ಹತ್ತಿರ ಹೇಳಿಸಿ ಇದನ್ನು ನನ್ನಿಂದ ಬರಿಸುತ್ತಿದ್ದಾರೆ ಅನ್ನುವ ಭಾವನೆ ಬಹಳ ಸ್ಪಷ್ಟವಾಗಿ ಭಾಸ ವಾಗುತ್ತಿದೆ.

ಹಾಗಾಗಿ ಇದನ್ನು ನಾನು 'ನನ್ನ ಕವಿತೆ' ಅಂತ ಹೇಳುವ ಧೈರ್ಯ ಮಾಡುವುದಿಲ್ಲ.

ಇದನ್ನು ಓದಿದ ಆ ನನ್ನ ಸ್ನೇಹಿತ...ಇದಕ್ಕೆ ಹೀಗೇ ಶೀರ್ಷಿಕೆ ಇಡು.... ಅಂತ ಹೇಳಿದ್ದರಿಂದ....ಅವನ ಇಚ್ಚ್ಚೆಯ ಮೇರೆಗೆ ಈ ಶೀರ್ಷಿಕೆ ಇಡುತ್ತಿದ್ದೇನೆ......




ಹರಿ-ಹರಿದು ಬರಲಿನ್ನು ಕಷ್ಟಗಳು ನನಗ

ಸುರಿ-ಸುರಿದು ಬರಲಿನ್ನು ದು:ಖಗಳು ನನಗ......

ಪ್ರಳಯದಲ್ಲಿ ಹಾರಿ ಇಂದೆನ್ನ ಜಳಕ

ಪುಟಿ-ಪುಟಿದು ಹಾರುವೆ, ನಾ ನಾಳೆ ನಭಕ......



ಉರಿ-ಉರಿದು ಬಾ ಬೆಂಕಿ ನೀ ನನ್ನ ಬಳಿಗ

ಸುಡು-ಸುಡು ನೀ ಎಷ್ತಾರೆ, ನಾ ಕರಗಲ್ಲ ಇವಕ......

ಒಳಗಿರುವ ಶಕ್ತಿ ಅದು ಬೆಳಗಿರುವ ತನಕ

ಜಿಗಿ- ಜಿಗಿದು ಬರುವೆ ನಾ, ಅದು ಇರುವ ತನಕ......



ನಗು-ನಗು ನೀ ನಿಶೆ ಇಂದು, ರಾತ್ರಿ ಇದು ನಿನಗ

ಗರ್ಭದಲಿ ಇರೋ ಸೂರ್ಯ ಹೊರಬರುವ ತನಕ......

ಬೆಂಕಿಯ ಚಂಡೊOದು ಬೆಳೆಯುತಿದೆ ಒಳಗ

ಹೊರಬಂದು ಜಗವನ್ನು ಬೆಳಗುವ ತವಕ......