ಓ ಮಂಗಳ ಆರತಿಯೇ
ಕುಣಿ ಕುಣಿದು ನೀನು ಹಾರುತಿಹೆ
ಯಾವ ತತ್ತ್ವವನು ಸಾರುತಿಹೆ
ಓ ಮಂಗಳ ಆರತಿಯೇ
ಓ ಮಂಗಳ ಆರತಿಯೇ
ನಿನ್ನ ಶಾಖವನು ಕಣ್ಣಿಗೆ ಒತ್ತಲು
ಮನ ಜಡ ನಿದ್ದೆಯು ಕರಗುತಿದೆ
ನಿನ್ನ ಶಾಖವನು ಎದೆಗೆ ಒತ್ತಲು
ತನುವಿದು ನನ್ನದು ನಲಿಯುತಿದೆ
ಓ ಮಂಗಳ ಆರತಿಯೇ
ಓ ಮಂಗಳ ಆರತಿಯೇ
ಸೂರ್ಯನ ರೂಪದಿ ಕಾಣುತಿಹೆ
ಪ್ರಕೃತಿ ಮಾಡಿದ ಸುಕ್ರುತಿಗೊಂದು
ಭೂ ಮಾತೆಗೆ ಕಡಲುಗಳಿಗೆ ಒಂದು
ನಿತ್ಯ ಆರತಿ ಮಾಡುತಿಹೆ
ಓ ಮಂಗಳ ಆರತಿಯೇ
ಓ ಮಂಗಳ ಆರತಿಯೇ
ಭಾರತ ಮಾತೆ ನನ್ನವಳೆಂಬ
ಕಿಚ್ಚದೂ ಒಂದು ಆರತಿಯೇ
ದಿನ ದಿನ ಎದ್ದು, ಕ್ಷಣ ಕ್ಷಣ
ನಿನಗೆ ಮಾಡುವೆ ನಾನು ಆರತಿಯೇ
ಓ ಮಂಗಳ ಆರತಿಯೇ
ಓ ಮಂಗಳ ಆರತಿಯೇ
ಚೇತನ ರೂಪದಿ ಕಾಣುತಿಹೆ
ಉರಿ ಉರಿ ನೀನು ಆರತಿಯೇ
ಓ ಮಂಗಳ ಆರತಿಯೇ
No comments:
Post a Comment