ಯೆಷ್ಟಾರ ಉಣಿಸುತಿಯೇ ತಾಯಿ ನೀನು
ನೀ ಇಲ್ಲದಿರಲು ನಾ ಬೆಳೆದೆನೇನು?
ಬೆಳೆದರೂ ಹಾಗೆ ಅದರರ್ಥಯೇನು?
ಒಡಲಲ್ಲಿ ಬಚ್ಚಿ ನನ್ನ ಕಾದು ಕಾದು
ಕೆನ್ನೀರ ಸತ್ತ್ವವನು ಹೀರಿ ಬೆಳೆದು
ನನ್ನ ತೀಡಿ ತೊಳೆದು ಅಲ್ಲಿ ರೂಪ ನೀಡಿ
ಈ ಚೇತನಕ್ಕೆ ಒಂದು ಮನೆಯ ಮಾಡಿ
ಯೆಷ್ಟಾರ ಉಣಿಸುತಿಯೇ ತಾಯಿ ನೀನು
ನಿನ್ನ ತತ್ತ್ವ ತುತ್ತುಗಳ ಮರ್ಮವೇನು
ಉಣಿಸುವೆ ಹಾಲು, ದೇಹಕೆ ನೀನು
ಮನಕೆ ಉಣಿಸುವೆ ಪ್ರೇಮದ ಜೇನು
ಧೈರ್ಯವ ಉಣಿಸಿ ಜೋಗುಳದಲ್ಲಿ
ಆದರ್ಶವ ಉಣಿಸಿ ತುತ್ತುಗಳಲ್ಲಿ
ಯೆಷ್ಟಾರ ಉಣಿಸುತಿಯೇ ತಾಯಿ ನೀನು
ನಿನ್ನ ತತ್ತ್ವ ತುತ್ತುಗಳ ಮರ್ಮವೇನು
ಮನವನು ಮಣಿಸುವ ದಾರಿಯ ಹೆಣೆಸಿ
ಅದರಲ್ಲಿ ನಡೆಯಬೇಕೆಂದು ಕಲಿಸಿ
ನಾ ಸೋತರೆ ಏನು, ಈ ಜಗದಲಿ ಇಂದು
ನಿನ್ನ ತೊಡೆಯೇ ನನಗೆ ಇದು ಊರ್ಜೆ ಬಿಂದು
ಯೆಷ್ಟಾರ ಉಣಿಸುತಿಯೇ ತಾಯಿ ನೀನು
ನಿನ್ನ ತತ್ತ್ವ ತುತ್ತುಗಳ ಮರ್ಮವೇನು
ನಾ ನಿನ್ನ ತೊರೆದು, ನೀ ನನ್ನ ತೊರೆದು
ಹೋದೆವೆಂದರೂ ಹೋದೆವೆಂದು?
ಜಗದಾಟವಾಡಿ ನಾ ಮಲಿನವಾಗಿ
ಭೂ ನಲ್ಲಿ ಮಲಗಿ ನಾ ವಿಲೀನವಾಗಿ
ನಾ ಮತ್ತೆ ಮತ್ತೆ ಮತ್ತೆ ಶುಭ್ರವಾಗಲು
ಬಂದು ಸೇರುವೆ ನಿನ್ನ ಒಡಲೋಳು
2 comments:
ಸಕ್ಕತ್ತಾಗಿದೆ ಸರ್, ನಿಮ್ಮ ಪದ ಭಂಡಾರ ಮಾತ್ರ ಅದ್ಭುತ..ಪ್ರತಿ ಕವಿತೆಯಲ್ಲೂ ಹೊಸ ಹೊಸ ಪದಗಳನ್ನು ಪರಿಚಯಿಸುತ್ತಿದ್ದೀರಿ. ಅದಕ್ಕಾಗಿ ದನ್ಯವಾದಗಳು. ಕೆಲ ಪದಗಳನ್ನು ನಿಮ್ಮ ಅನುಮತಿಯಿಲ್ಲದೆ ಕೆಲವೆಡೆಗಳಲ್ಲಿ ಉಪಯೋಗಿಸಿದ್ದೀನಿ ;-) ;-)
----Sri:-)
Super Anup......
ಒಳ್ಳೆಯ ಬರಹ, ಉತ್ತಮ ಶಬ್ದ ಬಳಕೆ, ತಾಯಿಯ ಬಗೆಗೆ ತು೦ಬಾ ಚೆನ್ನಾಗಿ ವಿಶ್ಲೇಷಿಸಿ ಬರೆದಿದ್ದೀರಿ,
ತಾಯಿ, ಮೊದಲು ಎದೆಹಾಲು, ನಂತರ ಮಾತು, ನಂತರ ವಿದ್ಯೆ ಎಲ್ಲವನ್ನು ಉಣಬಡಿಸುತ್ತಾಳೆ, ಇದೇಲ್ಲವನು
ಅಕ್ಷರಶಃ ನಿಜರೂಪಕ್ಕಿಳಿಸಿದಂತಿದೆ ಈ ನಿಮ್ಮ ಕವನ....
ನಿಮ್ಮಿಂದ ಇನ್ನು ಇಂತಹ ಒಳ್ಳೆಯ ಕವನಗಳು ಮೂಡಿ ಬರಲಿ....
ಒಳ್ಳೆಯದಾಗಲಿ .......
ಶಾಪಶ್ರೀ(ಶಾನವಾಡ ಪರಪ್ಪ ಶ್ರೀಶೈಲಪ್ಪ )
Post a Comment