ಉತ್ತಿಷ್ಠ ಭಾರತಿ, ಜಗತ್ ಸಾರಥಿ
ದೀಪ ನಾಡು ನೀ, ಜೀವ ನಾಡಿ ನೀ
ತೋರು ದಾರಿ ನೀ, ಜಗತ್ ಪಾಲಿನಿ
'ವಸುದೈವ ಕುಟುಂಬಕಂ' ಎಂದು ಸಾರು ನೀ
ಉತ್ತಿಷ್ಠ ಭಾರತಿ, ಜಗತ್ ಸಾರಥಿ
ಹೇ ಮಾತೆ ನೀ, ಜಗನ್ ಮಾತೆ ನೀ
ಕೈ ಹಿಡಿದು, ಮನ ತೊಳೆದು
ನೆಡೆಸು ಭಾಗವತ್ ಜಾತೆ ನೀ
ದಾರಿ ತೋರು, ಇಂದು ನೀ
ಅಂದು ಇಂದು ಎಂದೂ ನೀ
ಬೆಳಕ ತೋರೋ ಮಾತೆ ನೀ
ನೀನೇ ಕಾರಣ, ನೀನೇ ಹೂರಣ
ನೀನೇ ಪೂರಣ ಪೂರಣ
ಜಗತ್ ಭ್ರಮೆಗೆ, ಮಹತ್ ಭ್ರಮೆಗೆ
ನೀನೇ ಶಾಶ್ವತ ಮಾರಣ
ಅರಿವಿಗೆ ನೀನೇ ಕಾರಣ
ನಮ್ಮ ಚೇತನ ನಿನ್ನಲೇ ಧಾರಣ
No comments:
Post a Comment