
ಮುನ್ನುಡಿ: ರಾಧೆ ಮತ್ತು ಕೃಷ್ಣರ ಪ್ರೇಮವು.....ಶ್ರೆಷ್ಟಾತಿ ಶ್ರೇಷ್ಟ........ಪವಿತ್ರಾತಿ ಪವಿತ್ರ........
ಅವರ ಪ್ರೇಮಕ್ಕೆ.......ಸ್ಪರ್ಶದ ಹಂಗು ಇಲ್ಲ.... ಅದೇ ಅವರ ಪ್ರೇಮದ ಉತ್ಕುಷ್ಟತೆಯ ದ್ಯೋತಕ...
ಅಕೋ ಶ್ಯಾಮಾ....ಅವಳೇ ರಾಧೇ....ನಲಿಯುತಿಹರು ಕಾಣಿರೇ....
ಬನ್ನಿ.....ಅವರ ನಲಿವನು ಕಂಡು......ನಲಿಯುವ ನಮ್ಮ ಮನವನು ನೋಡೋಣಾ....
ಕರೆಯೇ ಕೋಗಿಲೆ
ನನ್ನ ಇನಿಯನ.......
ಮೊರೆಇಡುತಿದ್ದರು ....ನಾ...
ಮುನಿಸಿಕೊಂಡಿರುವನಾ.....
ಮನದ ಮಡಿಕೆಯಲಿ
ಭಾವನೆಗಳ ಮಜ್ಜಿಗೆಯ
ಕಡೆದವನನ.......
ತೇಲಿ ಬಂದ
ಒಲುಮೆಯ ಬೆಣ್ಣೆಯ
ಕದ್ದವನನ.......
ಕಳ್ಳ ಕೃಷ್ಣನಾ.......
ಸೂರ್ಯನು ಯಮುನೆಯ
ಕೆನ್ನೆಯ ಹಿಂಡಿ
ಕೆಂಪಾಗಿಸಿದಂತೆ.. .....ನಾ.....
ಅವನ ನೆರಳ ಸೋಕಿ
ಕೆಂಪಾಗಿರುವೆನಾ. .....?
ದಿಟ್ಟಿಯೋಳು ನನ್ನನು
ಮುಟ್ತುವನ.....
ಮುಟ್ಟದೆಯೇ....
ಮುಂಗುರುಳನು ನೇವರಿಸುವನ......
ಮನವು ಬರಿದಾಗಿದೆ.....
ಜಾರಿದ ಕಣ್ಣ ಬಿಂದುವು
ಕೆನ್ನೆಯ ಮೇಲೆ
ಗೆರೆ ಬರೆದಾಗಿದೆ......
ಹೃದಯದ ಒಳಗೆ
ಬರೆ...ತಾಗಿದೆ
ಕಣ ಕಣದಲ್ಲಿ
ನೀನು ಬೆರೆತಾಗಿದೆ
ಇನ್ನೂ ಬರಬಾರದೇ..... ?
2 comments:
ಎಷ್ಟು ಸಲ ಓದಿದರೂ
ಏನೋ ಕಾಡುತಿಹುದು
ಏನೋ ಹೇಳತೀರದು
ಏನೋ ಅಪೂರ್ಣವು
ಮರೆಮಾಚಿ ನಿಂತಿಹುದು ನನ್ನ ಮನದಲಿ
ಇದುವೆಯೇ ಅರ್ಥ ಕೊಡದ ಧಾವಂತ!
hi anup,
what can I comment excellent, continue the gud work.
Post a Comment